ಕಾಲ Poem by Praveen Kumar in Bhavana

ಕಾಲ

ಕಾಲ ಮಹಿಮೆಯ ನೇಮ ತಿಳಿದವರಿಲ್ಲ,
ಕಾಲ ನೃತ್ಯದ ನಿಯತ್ತನ್ನಳೆದವರಿಲ್ಲ,
ಕಾಲ ನೆತ್ತವನಾಡಿ ವಿಧಿಯ ಗೆದ್ದವರಿಲ್ಲ,
ಕಾಲದಾಳಕ್ಕಿಳಿದು ಕಾಲದರ್ಥವನ್ನರಿತವರಿಲ್ಲ;
ಹುಟ್ಟು ಕೊನೆಗಳಿಲ್ಲದ ನಿರಾಕಾರ ಕಾಲದ ಹೆಜ್ಜೆ
ಭೂತ ಭವಿಷ್ಯತ್ತು ಲೌಕಿಕಲೌಕಿಕ ಲೋಕಗಳ
ವಿಚಿತ್ರ ದಾಖಲೆಯ ವಿರಾಟ ರೂಪ.

ಕಾಲಪದರಿನ ಮೇಲೆ ಮೂಡಿರುವ ವರ್ಣಗಳು
ಕಾಲತೀತ; ಅನವರತ ನಿಲ್ಲುವುವು;
ಕಾಲಗರ್ಭದ ಅನಘ್ರ್ಯು ಸೂಕ್ಷ್ಮ ರತ್ನಗಳು
ಕಾಲದಿಗಂತವ ಮೀರಿಲ ಮೈ ತೋರುವುವು;
ಅನಂತ ಹಬ್ಬಿರುವ ಕಾಲದಾಕಾಶದ ಗುಂಟ
ಭೂತ ಭವಿಷ್ಯತ್ತು ಮರ್ಮಗಳ ಕರ್ಮದಲಿ
ಕಾಲ ಮಹಿಮೆಯ ನೇಮ ತಂತಾನೆ ಮೈಕೂಡುವುವು.

ಬೆಸೆದಿರುವ ಹೃದಯಗಳು ವಿರಹನೋವನ್ನುಂಡು
ಕಾಲನಲೆಯಲಿ ತೇಲಿ ಕಾಲಪ್ರವರ್ತನೆಯಲ್ಲಿ
ಯಾವುದೋ ಮೋಡಿಯಲಿ ಮತ್ತೆ ಮತ್ತೆ ಸೇರುವುವು,
ಅಪೂರ್ಣ ಸಂವೇದನೆಗೆ ಸಂಗೀತ ನುಡಿಸುವರು,
ಕಾಲ ಪೌರೋಹಿತದಲ್ಲಜರಾಮರರಾಗುವರು;
ಕಾಲ ಸ್ಥೌಲ್ಯದ ಆಚೆ ಮೇಳೈಸಿದ ಭಾವರಾಗ ಸೆಳೆ
ಮತ್ತೆಂದೋ ಮಳೆಯಾಗುವುದು, ಜೀವರಂಗೇರುವುದು.

ಅಪರಿಚಿತ ಜೀವಗಳು ಅಪರಿಚಿತ ಪರಿಸರದಲ್ಲಿ
ಅಪರಿಚಿತ ಕಾರಣಕೆ ಒಂದಾಗಿ ಸೇರುವರು,
ವಿಧಿ ವ್ಶೆಚಿತ್ರ್ಯಗಳು ಅಪರಿಚಿತ ಪರಿಕ್ರಮಣದಲಿ
ಒತ್ತಟ್ಟಿಗೆ ಬಂದು ಅಕಸ್ಮಿಕವ ತೋರುವುವು,
ಅನಿರೀಕ್ಷಿತ ಸಂವೇದನೆ, ಅನಪೇಕ್ಷಿತ ಉನ್ಮಾದ
ಕಾಲ ಭ್ರಮಣದ ಫಲ, ಕಾಲ ಕ್ರಮಣದ ನೇಮ,
ಕಾಲ ಮಹಿಮೆಯಜ್ಞಾನ ವಿರಾಟ ನೃತ್ಯ.

Friday, April 29, 2016
Topic(s) of this poem: time
COMMENTS OF THE POEM
READ THIS POEM IN OTHER LANGUAGES
Close
Error Success