ಕತ್ತಲಿನನಮಿತ ಸಾಗರದ ಕ್ಷಣಾರ್ಧ ಕಿಡಿ ನಾವು Poem by Praveen Kumar in Bhavana

ಕತ್ತಲಿನನಮಿತ ಸಾಗರದ ಕ್ಷಣಾರ್ಧ ಕಿಡಿ ನಾವು

ಹುಟ್ಟು ಸಾವಿನ ಮಧ್ಯೆ ಬದುಕು ಬೆಳಕಿರುವಾಗ.
ನಮ್ಮೊಳಗೆ ನಮ್ಲೆಲ್ಲ ಸುಖಶಾಂತಿ ತೃಪ್ತಿಯಿರುವಾಗ,
ದಟ್ಟ ಕತ್ತಲಲಿ ಮುಖಮುಚ್ಚುವ ಹುಚ್ಚುಹಂಬಲ ನಮಗೇಕೆ?
ಹೊರಗದ್ದಲದಲ್ಲಿ ಸುಖ ಹುಡುಕುವ ಹುಂಬತನ ನಮಗೇಕೆ?

ಹುಟ್ಟು ಸಾವಿನ ಮಧ್ಯೆ, ಬದುಕು ಬೆಳಕಿರುವಾಗ,
ಆ ಬೆಳಕಲ್ಲೆ ನಾವು, ನಮ್ಮತನ, ಸುಖ ದು: ಖವಿರುವಾಗ,
ಕತ್ತಲಿನನಂತ ಸಾಗರದ, ಕ್ಷಣಾರ್ಧ ಕಿಡಿ ನಾವು,
ಅವಕಾಶದಲಿ ನಿಗಿನಿಗಿಸಿ, ಲೋಕ ಬೆಳಗುವುದಿಲ್ಲವೇಕೆ?

ನಮ್ಮೊಳಗೆ, ನಮ್ಮೆಲ್ಲ, ಸುಖ, ಶಾಂತಿ, ತೃಪ್ತಿಯಿರುವಾಗ,
ನಮ್ಮೊಳಗಿನ ಶಕ್ತಿಯಲಿ, ಮುನ್ನಡೆಯ ನಕ್ಷೆಯಿರುವಾಗ,
ಹೊರಗದ್ದಲದ ನಡುವೆ ಪ್ರಶಾಂತ ದ್ವೀಪವು ನಾವು,
ತಾದ್ಯಾತ್ಮತೆುಂದ, ನಮ್ಮಲ್ಲೆ ವಿಹರಿಸುವುದಿಲ್ಲವೇಕೆ?

ಇದು ನಮ್ಮ ಮನೆ, ಇಲ್ಲಿ ನಮ್ಮದೆ ಶುಭ್ರ ಬೆಳಕು,
ಹೊರಗೆ ದಟ್ಟ ಕತ್ತಲಿನ ಅಡವಿ, ಭಯದ ವಾತಾವರಣ,
ಭೂತ, ಪಿಶಾಚಿ, ದೆವ್ವ, ನಿಶಾಚರಗಳ ಸಂಚಾರ,
ಅಲ್ಲೇಕೆ ಇಳಿದು ಹುಡುಕುವುದು ನಮ್ಮ ವ್ಯವಹಾರ?

ಒಳಗೆ ಇಳಿಯದ ನಾವು, ಹೊರಗೆ ಎದೆಯೆತ್ತಿ ಜಿಗಿಯುವುದುಂಟೆ?
ಬೆಳಕನರಿಯದ ನಾವು, ಇರುಳ ಬಗೆದೊಗೆದು, ಜುಸುವುದುಂಟೆ?
ಒಳಗಿನಿಂದ ಹೊರಟು, ಹೊರಗೆ ಜಿಗಿಯುವುದರಲ್ಲಿದೆ ಚಂದ,
ಬೆಳಕಿನಲಿ ಮಿಂದು, ತೊಯ್ದು, ಇರುಳ ಬಗಿಯುವುದೆ ಆನಂದ.

ಬೆಳಕಾಗಿ ಬಂದವರು ಹೊರಗೆ ಬೆಳಕ ಚೆಲ್ಲಬೇಕು,
ಅದು ತಾನೆ, ಬೆಳಕಿಗಿರುವ ಸಹಜ ಸಾರ್ಥಕ್ಯ?
ಕತ್ತಲಲಿ ಹಾರಿ, ಸೋರಿ, ಕತ್ತಲಲೆ ಹಬ್ಬಿ ಬೆಳೆಯುವವರು,
ಕತ್ತಲಿನ ಗರ್ಭದಲಿ, ನಂದಿ ಹೋಗುವುದು ಸತ್ಯ.

Friday, April 29, 2016
Topic(s) of this poem: philosophy
COMMENTS OF THE POEM
READ THIS POEM IN OTHER LANGUAGES
Close
Error Success