ಅಂಧೇರಿ ಲೋಕಲ್ಲು Poem by Raghavendra HM

ಅಂಧೇರಿ ಲೋಕಲ್ಲು

ಬಾಂಬೆ ಲೋಕಲ್ಲಿನ
ಮಹಿಳಾ ಬೋಗಿಯಲ್ಲಿ ಹುಡುಕುವುದಿಲ್ಲ ನಾವು
ನಂನಮ್ಮ ಸಾಕ್ಷಾತ್ಕಾರಕ್ಕಾಗಿ. ಅಸಿಟಿಲೀನ್‌ನಿಂದ ಅವಿರತವಾಗಿ ಬೆಸೆದಲೋಹಗಳಂತೆ
ನಾವು ಬೆಸೆದಿದ್ದೇವೆ-
ಕನಸುಗಳು, ಕಣಗಳು, ದುರಂತಗಳು, ದುರ್ವಿಧಿಗಳು,
ಅಂಗ-ಅಂಗಾಂಗಗಳು,
ಘಮಲು-ಗರ್ಭಗಳು.
ಸಾವಿರ ಕೈಗಳುಳ್ಳ,
ಮಿಲಿಯಾಂತರ ನಾಲಗೆಗಳುಳ್ಳ,
ಹಲವು ಗಂಡುಗಳುಳ್ಳ
ಕಾಳಿ, ಕಾಲಿಗೆ ಚಕ್ರ ಕಟ್ಟಿಕೊಂಡಂತೆ.
ಕೆಳಗಿಳಿದ ನಂತರ ನಾನು
ಕತ್ತರಿಸಬಹುದು ಗಜರಿಯನ್ನೋ ಅಥವಾ ಗೆಣೆಕಾರನನ್ನೋ- ಆಯ್ಕೆ ನನ್ನದೇ.
ಕಡೆಯ ಆಯ್ಕೆಯ ಮುಂದೂಡಿರುವೆ

This is a translation of the poem 5:46, Andheri Local by Arundhathi Subramaniam
Wednesday, August 24, 2022
POET'S NOTES ABOUT THE POEM
Translation of Arundhathi Subramaniam's English poem Andheri Local
COMMENTS OF THE POEM
Close
Error Success