ತೋಟಗಾರ Poem by PRAVEEN KUMAR Kannada Poems

ತೋಟಗಾರ

ಕತ್ತಲಿಂದ ಬೆಳಕಿನತ್ತ ನಮ್ಮ ತಂದ ದೀಪ ನೀವು,
ಗಾಳಿ ಬೀಸಿ, ನೀರು ಹಾಕಿ, ಮೈಯ ತಡವಿ, ಮರೆಸಿ ನೋವು,
ಬೇಲಿ ನೆಟ್ಟು, ಗೋಡೆ ಕಟ್ಟಿ, ಹಬ್ಬಿ ಬೆಳೆಯುವಂತೆ ನಾವು
ಗಾಳಿ ಮಳೆ ಬಿಸಿಲಿನಲ್ಲಿ, ಹಗಲು ರಾತ್ರಿ ಮರೆತು ದುಡಿದ
ನಿಷ್ಠ ತೋಟಗಾರ ನೀವು, ಮೈಯ ಬಗ್ಗಿ ಅಗೆದು ಕಡೆದ
ಪಾತಿಯಲ್ಲಿ ನೆಟ್ಟ ಗಿಡ ಬೆಳೆದು ಹಬ್ಬಿ ಹೂವು ಬಿಟ್ಟು,
ಬಣ್ಣ ರಂಗು ಸುತ್ತ ಚೆಲ್ಲಿ, ತಂಪು ಕಂಪು ನಮಗೆ ಕೊಟ್ಟು
ನಿಮ್ಮ ಕುಸುರು ಕೆಲಸಕ್ಕೊಂದು ಕುರುಹು ಆಗಿ ನಿಂತಿದೆ,
ನಿಮ್ಮ ದುಡಿಮೆ ಬೆವರಿಗೊಂದು ತಕ್ಕ ಪ್ರತಿಫಲ ಕೊಟ್ಟಿದೆ.

ಮಧ್ಯರಾತ್ರಿ ನೀವು ಎದ್ದು, ಮಳೆಯ ಮಧ್ಯೆ ಹೊರಗೆ ಬಂದು
ತೊಯ್ದು ತೋಟದತ್ತ ಹೋಗಿ, ಗಿಡಮರದ ಸ್ಥಿತಿಯ ಕಂಡು,
ಪಾತಿ ಬಿಚ್ಚಿ ನೀರು ಚೆಲ್ಲಿ, ಗಾಳಿಗಡ್ಡ ಮರೆಯ ನೀಡಿ,
ಗೆಲ್ಲುಕೊಂಬೆ ಮುಟ್ಟಿ ಮುಟ್ಟಿ, ಮುರಿದ ಕೊಂಬೆ ರೆಂಬೆ ಎತ್ತಿ
ಸರಿುದೆಂದು ತೃಪ್ತಿಗೊಂಡೆ ಮತ್ತೆ ಮನೆಗೆ ಮರಳುವವರು,
ತೋಟದತ್ತ ತಿರುಗಿ ತಿರುಗಿ ಹೆಮ್ಮೆುಂದ ನೋಡುವವರು,
ಬಗ್ಗಿ, ಸೆಟೆದು ಅಂದ ಚಂದ, ಮನಸಿನಲ್ಲೆ ಸವಿಯುವವರು
ತೋಟಗಾರ ಮಾತ್ರವಲ್ಲ, ಮಾಟಗಾರ, ಕನಸುಗಾರ,
ಹೃದಯ ತೋಟದಲ್ಲಿ ಪ್ರೀತಿ ರಾಶಿ ರಾಶಿ ಬೆಳೆಯುವವರು.

ನಿಮ್ಮ ತೋಟ ಒಂದು ಕಾವ್ಯ, ರಸವೊಸರುವ ಸಂಗೀತ,
ನಿಮ್ಮ ತೋಟ ವಾಸ್ತುಶಿಲ್ಪ, ಕಣ್ಣು ತುಂಬುವ ವರ್ಣ ಚಿತ್ರ;
ಗಿಡಮರದ ಪಾತಿ ಪಂಕ್ತಿ, ನಡುವೆ ಹೂವಿನ ಮಧುರ ಹಾಸು;
ಇಲ್ಲೆ ಸವೆದ ನಿಮ್ಮ ಬಾಳು ತೋಟದಂತೆ ತಂಪು ಕಂಪು,
ಇಲ್ಲೆ ಮಣ್ಣು ಬೆರೆತ ಜೀವ ತೋಟದಂತೆ ರಂಗು ರಂಗು,
ನಿಮ್ಮ ತ್ಯಾಗದಿಂದ ಮೊಳೆದ ಬಳ್ಳಿ ಮರವ ತಬ್ಬಿ ಬೆಳೆದು
ದಷ್ಟ ಪುಷ್ಟ ಪೊದೆಯೆ ಆಗಿ ನಿಮ್ಮ ನೆನಪು ತರುತಿದೆ,
ನೀವು ಬಿತ್ತಿದಂತ ಬೀಜ, ತೋಟ ತುಂಬ ಹಸುರು ತಂದು
ತೋಟವಲ್ಲ, ದೇವಲೋಕ ಎಂಬ ಭಾವ ತರುತಿದೆ.

ಬಣ್ಣ, ಕಂಪು, ತಂಪುಯೆಂದು, ಹೂವು, ಹಣ್ಣು, ಹಕ್ಕಿಯೆಂದು
ಮೈಗೆ ಮಣ್ಣು ಬೆವರು ಒರೆಸಿ, ಬಿಸಿಲು ಮಳೆಗೆ ದೇಹವಿರಿಸಿ
ಬೆನ್ನು ಬಗ್ಗಿ ದುಡಿದ ನಿಮ್ಮ ಮನಸು ಹೃದಯ ಹೇಗೆ ಈಗ
ನಿವೃತ್ತರೆಂದು ತೋಟ ಬಿಟ್ಟು ದೂರದೂರಿನತ್ತ ಹೋಗೆ
ನಿಮ್ಮನೊಡಂಬಡಿಸಿತೊ, ಒಂಟಿ ಬಾಳಿಗೆ ಎಳೆುತೊ?
ನಿಮ್ಮ ಕೈಯಾರೈಕೆ ಮರೆತು, ನಿಮ್ಮ ಕಣ್ಣು ಪಹರೆ ಸರಿದು
ಪಾಳುಬಿದ್ದ ಅವಶೇಷದಂತೆ, ಲಕ್ವ ಹೊಡೆದ ದೇಹದಂತೆ
ತೋಟ ನೋಡಿ ಒಣಗಿದೆ, ಅಂದ ಚಂದ ಕರಗಿದೆ,
ನಿಮ್ಮ ಬರವಿಗಾಗಿ ತೋಟ, ಅಂಗಲಾಚಿ ಕಾದಿದೆ.

ಒಮ್ಮೆ ಬಂದು ಮೋಡಿ ಮಾಡಿ, ತೋಟಕ್ಕೊಂದು ಜೀವ ನೀಡಿ,
ಪ್ರೀತಿುಂದ ಮೈಯ ತಡವಿ, ಹೊಸತು ರೂಪ ರಂಗು ನೀಡಿ,
ನೀವು ನೆಟ್ಟು ಬೆಳೆದ ತೋಟ ಹೀಗೆ ಬಿದ್ದು ಹೋಗಬೇಕೆ?
ನಿಮ್ಮ ದುಡಿಮೆ, ಬೆವರು, ತ್ಯಾಗ ಹೀಗೆ ಮರೆತು ಕರಗಬೇಕೆ?
ತೋಟಗಾರ ಮರೆತ ತೋಟ, ತೋಟವಾಗಿ ಬೆಳೆಯದು;
ಹೀಗೆ ನಿಮ್ಮ ತೋಟ ಬಿಟ್ಟು, ನೀವು ಹೊರಟು ನಿಂತರೆ,
ತನ್ನ ಕಾಲ ಮುಗಿುತೆಂದು ನಿವೃತ್ತರಾಗಿ ಹೋದರೆ
ಅನಾಥ ತೋಟ ನಿಮ್ಮ ಬಿಟ್ಟು ಹೇಗೆ ತಾನೆ ಇರುವುದು?
ಹೇಗೆ ಮುಂದೆ ಬೆಳೆದು ಬೆಳೆದು ಸ್ವರ್ಗ ಧರೆಗೆ ತರುವುದು?

ತುಳುನಾಡ್‍ದ ಬಾನೊಡು ಬೊಲ್ಲಿಯಾದ್
ಮೂಡುದು ಬತ್ತಿನ ಪೊರ್ಲುದ ತುಡರ್
ಕಾಂಡೆದ ಕೊಂಡಾಟಗ್ ಮರ್ಲಾದ್,
ಮೂಡುದ ಬೊಲ್ಪುಡು ಒಂಜಾದ್ ಪೋಂಡು;
ಕಷ್ಟನಷ್ಟೊಗು ಸುಲಭದಿಷ್ಟೊಗು ಬಗ್ಗಂದೆ
ನಡತಿ, ಸತ್ವ-ಸತ್ಯ ಸ್ವಾಭಿಮಾನದ ಕಡಲ್
ಮೇಲ್ ಕೀಳ್ ಮೀರ್ ದಿ ಮಿತ್ತದ ಲೋಕೊಗು,
ಜೀವ ಬೊಲ್ಪುನು ತುಂಬೊಂದು ಪೋಂಡು

Friday, April 29, 2016
Topic(s) of this poem: father
COMMENTS OF THE POEM
READ THIS POEM IN OTHER LANGUAGES
Close
Error Success