ಪಯಣ Poem by Praveen Kumar in Bhavana

ಪಯಣ

ದಿಗಂತ ದಾಟಿದ ಹಾದಿಯುದ್ಧ ದೂರ ಪಯಣದ ದಾರಿ,
ನಡೆದಷ್ಟು ಸಿಡಿದು ಕಾಣುವ ಅಂತ್ಯಕಾಣದ ಹಾದಿ;
ಕಣ್ಣು ಹಾುಸಿದತ್ತೆ ಮುಸುಕಿದ ದಟ್ಟ ಮಂಜಿನ ಹೊದಿಕೆ;
ಮೈಲುಗಳಾಚಿನಸ್ಪಷ್ಟ ನಾಳೆಗಳು ಮೈತೋರುವವರೆಗೆ,
ಕಾಲಕೋಶದಿ ಸಿಡಿದು ಇಲ್ಲಿದೀಗ ತಂತಾನೆ ಮೂಡುವವರೆಗೆ
ಮುಂದೆ ಕಾಲೆಳೆದು ನಡೆಯುವ ನೇರ ಕುರುಡು ಪಯಣ,
ವರ್ತಮಾನದ ಸರಪಳಿಯುದ್ದ ಭವಿಷ್ಯತ್ತಿಗೆ ನಮ್ಮ ಪಯಣ.

ನಿನ್ನೆ ನಾಳೆಯ ಕೊಂಡಿ ಜೀವವನಿಲ್ಲಿ ಕೂಡಿಸಿ ನಿಲಿಸಿ
ಕತ್ತಲಿನಾಳದ ನಡುವೆ ನಾನುನನದೆಂಬ ಪರಿಜ್ಞಾನ ಚೆಲ್ಲಿದೆ ನೋಡಿ;
ಬಂದೆನೆಲ್ಲಿಂದ, ಮುಂದೆಲ್ಲಿಗೆ ಹೇಗೆ ನಡೆಯುವುದು ಪಯಣ,
ಕೊನೆಗೆ ವರ್ತಮಾನ ಪರಿಜ್ಞಾನ ಹೇಗೆಲ್ಲಿಂದ ಮೂಡಿತೆಂಬ
ಅವ್ಯಕ್ತಜ್ಞಾನವ ಹೊತ್ತು, ಕಾಲಕುದುರೆಯನೇರಿ ಕಣ್ಮುಚ್ಚಿ
ಸಾಗಿಸಿದಲ್ಲಿ ಹೋಗುವ ನಮಗೆ ಸ್ಥಿತ ಸ್ಥಲಕಾಲ ನಮ್ಮದು,
ಎಡಬಲ, ಹಿಂದೆಮುಂದೆಗಳ ವ್ಯಕ್ತ ಕವಲು ಹಾದಿಯ ಗೊಂಚಲು.

ಯಾವ ಮರೆಯಲಿ ಯಾವ ವ್ಯೂಹ ಕಾದಿದೆಯೆಂದು,
ಯಾವ ಮಾಯಾವಿ ಭಸ್ಮಕಪಾಲವನೊಗೆದು ಶಪಿಸಿ ನಿಂತು
ನಿಂತಿದ್ದ ನೆಲದಡಿುಂದ ಬೆಂಕಿ ಕೆಂಡ ಹೊರತರುವನೆಂದು
ವರ್ತಮಾನದ ಕ್ಷಣಿಕ ಕ್ಷಣದಲ್ಲಿ ಸದಾ ಬದಲಾಗುವ ನಮಗೆ,
ನಾನು ನನದೆಂಬ ಝಳದಡಿಯಲ್ಲಿ ಹೂತು ಮೈಮರೆತ ನಮಗೆ
ತಿಳಿಯುವುದು ಹೇಗೆ, ಪರಿಜ್ಞಾನ ಬೆಳೆಯುವುದು ಹೇಗೆ?
ಮೈಮೇಲೆ ಬಂದಾಗ ಚಡಪಡಿಸಿ ಧರಿಸಿ ಜೀವೀಕರಿಸುವುದು ಹೇಗೆ?

ನಿನ್ನೆಯ ನೆನೆಪು, ನಾಳೆಯ ಕುತೂಹಲದ ಮಧ್ಯೆ ನಿಂತಿಹ ನಾವು
ಕಾಲಪಟ್ಟಿಯ ಮೇಲಿನ ಮುಳ್ಳಾಗಿ ಸದಾ ಚಲಿಸುತ್ತಿರಬೇಕು,
ನಾಳೆ ಭರವಸೆಗಳನಗೆದು ಹೊತ್ತು ನಿನ್ನೆಗಳಿಗೆ ಚೆಲ್ಲಿ
ಹೊಸ ಹೊಸ ವರ್ತಮಾನದಲಿಗಿನ ಮೇಲೆ ಸಮತಲ ತೂಗಿಸಬೇಕು,
ಈ ಅಂತ್ಯಕಾಣದ ಪಯಣದುದ್ದ ಹೊಸ ಹೊಸವಿಷ್ಕಾರಗಳು,
ನೆಲಬಿಚ್ಚಿ ಮೇಲೇರುವನುಭವದ ಕಹಿಸಹಿ ಸಾರಗಳು
ನಮ್ಮನೊಯ್ಯವ ಕಾಲನೆಲ ಸಮಾಗಮದ ಚಿತ್ರಗಳು.

ತಗ್ಗುದಿಬ್ಬಗಳಿರಲಿ, ಹೊಂಡ ಕೆಂಡ ಗಂಡ ಗಡಣಗಳಿರಲಿ,
ಇಂದಿಲ್ಲಿಡುವ ಹೆಜ್ಜೆ ಹಿಂತೆಗೆಯುವುದು ಸಲ್ಲ;
ಕಾಲಿಟ್ಟದೆ ಕಾಲ, ತಾಳ ಬಿದ್ದುದೆ ನೆಲ, ಭವಿಷ್ಯತ್ತಿನ ಬಲ,
ಕಾಲಸ್ಥಲಸಿದ್ಧ ಕಾಣ್ಕೆಯನುಮಾನದಿ ನೋಡುವುದು ಹೊಲ್ಲ;
ತಂಬೆಲರಿರಲಿ, ಬಿರುಗಾಳಿುರಲಿ, ಬೀಸುವುದು ಮುಖಾಮುಖಿ ಸತ್ಯ;
ಉಕ್ಕಿನ ಜೀವಕ್ಕೆ ದಪ್ಪತೊಗಲಿನ ಗೂಡುಗಂಟುಗಳ ಕಟ್ಟಿ
ಕಾಲಗಾಲಿಯ ಮೇಲುರುಳುತ್ತ ಕಾಲಾಘೂತ ಸಹಿಸಬೇಕು.

ದೂರ ಪಯಣದ ದಾರಿಧೂಳು, ಬೆವರು ಮೆತ್ತಿ
ಉರಿ ಬಿಸಿಲಿನ ಝಳಕೆ ದಾರಿ ಬಳಲಿಕೆ ಮುತ್ತಿ ಬರಲು,
ಇಂದು ನಿನ್ನೆನಾಳೆ ಕಲಸುಮೇಲೋಗರದಲ್ಲಿ ಕಣ್ಣು ಕಪ್ಪಿಡಲು,
ದಿಕ್ಕುಗಳು ಸುತ್ತಿ, ಬುದ್ಧಿ ಸ್ಥಲಮಿತಿಗಳ ಹದ ಮರೆತು
ಭರವಸೆ ಬತ್ತುವುದು, ನಿಂತ ನೆಲಕಾಲ ಚುಚ್ಚುವುದು, ಕಚ್ಚುವುದು;
ಬಸಿವ ರಕ್ತತರ್ಪಣದಿಂದ ಕೃಷ್ಣಾರ್ಪಣವೆನುತ ನಿಲ್ಲದೆ ನಡಿದು
ನಿಷ್ಕಾಮ ಕರ್ಮದಿ ಪಯಣ ಸದಾ ಸಾಗುತ್ತಿರಬೇಕು.

ನಿಂತ ನೆಲ ನಮ್ಮದಲ್ಲ, ನಿಲ್ಲಿಸಿದ ಕಾಲ ನಮ್ಮದಲ್ಲ,
ನೆಲಕಾಲ ತಂದಿಕ್ಕಿದ ಸುಳಿಪಾಳಿಗಳು ನಮ್ಮವಲ್ಲ;
ನಾವು ನಮ್ಮದು, ನಿಷ್ಕಾಮ ಕರ್ಮದ ನಮ್ಮ ಛಲ ನಮ್ಮದು;
ಹತ್ತದ ಬತ್ತದ ಜೀವ ನೇರದಿಟ್ಟಿಯನಿಟ್ಟು ನಡೆದು
ಮೇಲೇರದೆ ಕೆಳಗಿಳಿಯದೆ ಕಾಲನೆಲನೇರಕ್ಕುರುಳುತ್ತಿರಲು
ದಾರಿಗಳು ಬಾುಬಿಟ್ಟು ಹೂವು ಸ್ವಾಗತ ಕಾಯುವುವು,
ಕಾಲಗಳು ಮೈ ಬಿಚ್ಚಿ ಸೇವೆ ಕೈಕೊಳ್ಳುವುವು.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success