ಕ್ಷ ಕಿರಣ Poem by Praveen Kumar in Bhavana

ಕ್ಷ ಕಿರಣ

ಪೊಲೀಸರು ಪೋಲಿಗಳು ತಳದಿಂದ ತುದಿತನಕ,
ಕೂಪ ಮಂಡೂಕಗಳು, ಯಮನ ಅಪರಾವತಾರ;
ಮಾನವತೆ ಬಳ್ಳಿ ಕಡಿದ ಕ್ಷುದ್ರ ರಾಹುಕೇತುಗಳು,
ಬುದ್ಧಿ ದಂಡ, ರುಂಡವುದುರಿದ ಮುಂಡ ಪಿಂಡ;
ಕತ್ತಲಾಕಾಶದ ತುಂಬ ಕೇಕೇ ಹಾಕುವ ಉಲ್ಕೆ,
ಬೆಳಕಿಂದ ಹಿಂದೋಡುವ ನಿಸ್ತೇಜ ಜೀವರಾಶಿ.

ನಿಮ್ಮ ಬಿಗಿ ಭದ್ರತೆಗೆ ಕಾರಣವಿವರೆನ್ನುವಿರ?
ಜಿಂಕೆ ಮೊಲದ ಕಾಪಿಗೆ ತೋಳಗಳ ಪಹರೆಯೆ?
ಹಿಡಿದು ತಿನ್ನುವ ಜನರ ಹೊಡೆದು ತಿನ್ನುವ ಬಕಾಸುರ;
ಇವರಿಲ್ಲದಲ್ಲಿ ಹಿಂಸೆ, ಗೊಂದಲ, ದೌರ್ಜನ್ನವಿಲ್ಲ;
ಕೋವಿ ಕಾನೂನಿನ ಕೈಯಿಂದ ಕಾನೂನು ಮುರಿವ ವೃತ್ತಿಪರ,
ನೀತಿ ನಿಯತ್ತಿಗೆ ಹೊರಗು, ಹೃದಯ ಬುದ್ಧಿಗೆ ಹೊರಗು.

ಹಲವು ದರ್ಜೆಗಳು, ದರ್ಜೆಗೊಂದೊಂದು ಮರ್ಜಿ,
ಪೆಡಸು ಮರ್ಜಿಗೆ ಮೀರಿ ಬಾಳು ಕಂಡವರೆ ಅಲ್ಲ;
ನಾುಕಚ್ಚಾಟ, ದರ್ಜೆಗೊಂದೊಂದು ಗುಂಪು,
ತಮ್ಮವರ ಪಹರೆಯಲಿ ಬೊಗಳುವರು, ಕಚ್ಚುವರು;
ತಲೆುದ್ದರಲ್ಲವೆ ನ್ಯಾಯನ್ಯಾಯದ ತರ್ಕ ತಿಳುವಳಿಕೆ?
ಹೊರಲೋಕ ಪರಿಜ್ಞಾನ ಲವಲೇಶವಿಲ್ಲ.

ಹಲ್ಕ ಉಲ್ಕೆ ಅನಕ್ಷರಸ್ಥ ಚಪ್ರಾಸಿ ಚಂದ ಚೋರರು,
ಚೀಟಿ ವಂಚನೆ ಜೇಬು ತುಂಬುವ ನಿಜ ಮದಾಂಧ ದಾನವ;
ಅಭಾಸ ತಂದ ಮೇಲೂರರಾವಣ ವಾನರಜೀ ಬೆಂತರಗಳು,
ಲಾಭ ನೋಡಿ, ಜೊಲ್ಲು ಸುರಿಸುವ ಗುಲ್ಲು ಶುನಕಲಿಂಗರು;
ಒಳಗೆ ಟೊಳ್ಳು, ಹೊರಗೆಗುಲ್ಲು ಹಾಕಿ ಹಲ್ಲು ಕಿರಿವರು,
ಬಾಡಿಗೆಗಿತ್ತ ಕುರುಡುದಂಡ ಅಹಂಭಾವದಿ ಹಿಡಿವರು.

ಎಲ್ಲ ಕಡೆ ತುಂಬಿರುವ ಹಿಂಸೆ, ವಂಚನೆ, ದೌರ್ಜನ್ಯ,
ಪೊಲೀಸರಿಗೆ ಬಹಳ ಪ್ರಿಯ;
ಕಾನೂನಿನ ಹೊರಗೆ ನಿಂತು ಕಾನೂನಿನ ಬಲೆಯ ನೆಸೆವರು;
ಸಮವಸ್ತ್ರದ ಮರೆಯಲ್ಲಿ ಹೃದಯ ಬುದ್ಧಿ ಹಿಡಿತದವರು
ಸಹಾರ ಬಂಜರು ಭೂಮಿಯಲ್ಲಿ ಓಯಸೀಸ್ ರೂಪದಲ್ಲಿ
ಪೋಲೀಸರಲ್ಲಿಯೂ ಇರುವರು.
ಪೋಲೀಸರಿಗೆ ಪೋಲಿತನ ಬಿಟ್ಟವರ ರುಚಿಯೆುಲ್ಲ,
ಪೋಲೀಸ ನಿಸ್ತೇಜರಿಗೆ ತೇಜಸ್ಸಿನೆದುರು ಮುಜುಗರ;
ಬೆಳಗುತ್ತ ಬಂದವರ ಮೇಲೆ ಸುಳಿಗಾಳಿಯ ಬೀಸುವರು,
ಬೆನ್ನತ್ತುವರು, ಒದೆಯುವರು, ಕೇಕೇ ಹಾಕುವರು,
ನಿಸ್ತೇಜ ನಿರ್ಜೀವಿ ನೀನಾಗೆಂದು ತೋರುವರು,
ಬೆನ್ನುಹುರಿ ಬಗ್ಗದಿರ ಬಹಿಷ್ಕಾರ ಹಾಕುವರು.

Friday, April 29, 2016
Topic(s) of this poem: police
COMMENTS OF THE POEM
READ THIS POEM IN OTHER LANGUAGES
Close
Error Success