ಸಮಚಿತ್ತತೆ Poem by Venkatesh Davangere

ಸಮಚಿತ್ತತೆ

Rating: 5.0

ಕಳೆದುಹೋದ ಈ ಎಲ್ಲಾ ವರ್ಷಗಳ ನಂತರ
ನೀನೇನು ಮಾಡಿದ್ದೀ ಎಂದು ನೀವು ಕೆಳಬಯಸಿದರೆ
ನಾನು ಹೇಳುತ್ತೇನೆ: -
ನಾನು ಬಂಗಲೆ ಮಾಡಲಿಲ್ಲ, ಕಾರು ಕೊಂಡಿಲ್ಲ,
ರಾಶಿ ಹಣ ಕೂಡಿಡಲಿಲ್ಲ: ಆದರೆ,
ನಾನು ಕಲಿತಿದ್ದೇನೆ, ಅನುಕ್ಷಣವು ಕಲಿಯುತ್ತಿದ್ದೇನೆ.

ಕಲಿತಿದ್ದೇನೆ ನಾನು ಅಮಾನವೀಯತೆಯ ನಡುವೆ
ಮಾನವೀಯತೆ ಮೇರೆಯುವುದು ಹೇಗೆಂದು,
ಕ್ರೂರತೆಯ ನಡುವೆ ಸೌಮ್ಯವಾಗಿರುವುದು ಹೇಗೆಂದು,
ನನ್ನ ಸ್ವ ಕೇಂದ್ರಿತ ಅಹಂ ವಿರುದ್ಧ
ಹೋರಾಡುವ ಹೊರತಾಗಿಯೂ ಪರರ ಬಗ್ಗೆ ಸಹಾನುಭೂತಿ ಹೊಂದುವುದು ಹೇಗೆಂದು,
ನೆರೆಯವನ ನೋವನ್ನು ಹೇಗೆ ಶಮನಗೊಳಿಸುವುದೆಂದು,
ಇನ್ನೊಬ್ಬನ ಸಾಧನೆಯನ್ನು ಹೇಗೆ ಮೆಚ್ಚುವುದೆಂದು,
ವೈಫಲ್ಯಗಳನ್ನು ಹೇಗೆ ಸ್ವೀಕರಿಸುವುದೆಂದು ಮತ್ತು
ಹೊಸ ಅವಕಾಶಗಳ ಎದಿರು ನೋಡುವುದೆಗೆಂದು,
ಪ್ರೀತಿಯನ್ನು ತೋರಿಸಲು- ಸ್ವೀಕರಿಸಲು ನಾಚಿಕೆಪಡಬಾರದೆಂದು,
ಸೂರ್ಯ, ಚಂದ್ರ ಹುಣ್ಣಿಮೆ ಮತ್ತು ಅರ್ಧಚಂದ್ರಾಕಾರವನ್ನು ನೋಡಿದ್ದರೂ,
ನಕ್ಷತ್ರಗಳ ಬೆಳಕು ನನ್ನ ಕಣ್ಣುಗಳಲ್ಲಿ ಪ್ರತಿಪಲಿಸಿದ್ದರೂ,
ನಾನು ಎಂದಿಗೂ ಬೆಳಕನ್ನು ಮಾತ್ರವೇ ಬಯಸಲಿಲ್ಲ,
ನನ್ನಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಲು
ನಾನು ಕತ್ತಲೆಯನ್ನು ನನ್ನೊಳಗೇ ಬಿಟ್ಟಿದ್ದೇನೆ.

ಓಹ್!
ನಾನು ಪೂರೈಸದ ನನ್ನ ಜವಾಬ್ದಾರಿಗಳ ವೈಪಲ್ಯಕ್ಕಾಗಿ
ನೀವು ನನ್ನ ದೂಷಿಸಬಹುದು,
ಆದರೆ, ನಾನು ಜವಾಬ್ದಾರಿಯಿಂದಿರುವಾಗ ಸರಿಯಾಗಿದ್ದಾಗ ನನ್ನ ಮುಂದೆ ನಿಲ್ಲುವ ದೈರ್ಯ
ಕೂಡ ನೀವು ಮಾಡಲಾರಿರಿ,
ಏಕೆಂದರೆ, ನೀವು ಶಾಂತಿಯನ್ನ, ನೆಮ್ಮದಿಯನ್ನ ಜೀವನದೊಂದಿಗೆ ಪಣಕ್ಕಿಟ್ಟಿದ್ದೀರಿ,
ನಾನು ಜೀವನವನ್ನ ಸಮಚಿತ್ತತೆಯ ಮೇಲೆ
ಶಾಂತಿಯ ಮೇಲೆ ಕಟ್ಟುತ್ತಿದ್ದೇನೆ...!

This is a translation of the poem Sobriety by Venkatesh Davangere
Tuesday, August 11, 2020
Topic(s) of this poem: lifestyle
COMMENTS OF THE POEM
Close
Error Success