ಬದುಕು Poem by Praveen Kumar in Bhavana

ಬದುಕು

ದುಡಿತ ತೊಳಲಾಟ ಬದುಕಿರುವವರೆಗೆ,
ಮತ್ತೆ ಸ್ತಬ್ದ ಕತ್ತಲು, ನಿಶ್ಶಬ್ಧ ಸುತ್ತಲು
ಆಶೆ ನಿರಾಶೆಯ ಬಡಿತ ಜೀವ ತುಡಿಯುವವರೆಗೆ,
ಮತ್ತೆ ನಿರಾಸಕ್ತ ನೀರವ ನಿರ್ಭಾವ ಕತ್ತಲು.

ಭಯ ಚಿಂತೆ ಕತ್ತರಿಯಲ್ಲಿ ತತ್ತರಿಸಿದ ಜೀವ
ಕತ್ತಲಿನ ದ್ರಾವಣದಲ್ಲಿ ಕರಗಿ ಸೇರುವಾಗ,
ಬದುಕು ವ್ಯೂಹದ ಯಾತ್ರೆ ಕೊನೆ ಮುಟ್ಟುವಾಗ
ಮತ್ತೆಲ್ಲಿ ಉಂಟು ಸುಖ ಸಂಬಂಧದ ಗಂಟು!

ಹೃದಯ ಬಡಿಯವವರೆಗೆ, ಜೀವ ತುಡಿಯುವವರೆಗೆ
ಕಾಲಿಗೆಡರುವ ರಂಗು ಸಂಗೀತಗಳೆಷ್ಟು!
ಕನಸು ಕಲ್ಪನೆ ನೂಲೇಣಿ ಮೇಲೆ ಹತ್ತುವ ತವಕ
ತಾಳ ತಪ್ಪಲು ಭುವಿಗುದುರುವ ದಿಗಿಲುಗಳೆಷ್ಟು!

ಕಂಡಷ್ಟು ಬೇಕು, ಉಂಡಷ್ಟು ಹಸಿವು
ಉಸಿರು ಹೊರಗೊಳಗೆ ಬೆರೆಸುತ್ತಿರುಕವವರೆಗೆ,
ದೇಹದಹಿಸುವ ದಾಹ, ಜೀವ ಹಿಂಡುವಾವೇಗ
ಬದುಕು ಚಿಪ್ಪಿನ ಬಿಸಿಯಲಿ ಬೆಸೆದಿರುವವರೆಗೆ.

ಜೀವಂತ ಬದುಕು ಭಾವಸಂವೇದನೆ ಕಡಲು,
ಹಿತಹಿತ ಪ್ರವಾಹಗಳನವರತವರಸೆ;
ಬದುಕಿನೊರತೆಯು ಹಿಂಗಿ ಹಬ್ಬಲು ಬರುಡು,
ಸುತ್ತ ‘ಏರಿಳಿತವಿಲ್ಲದ ಸುಡುವ ಮರಳು ಕಾಡು.

ಹೊಸನುಭವಕ್ಕಾಗಿ ತವಕಿಸುವ ಬದುಕು,
ಸತ್ಯಸೌಂದರ್ಯವ ಹೀರಿ ಹಬ್ಬಿ ನಿಲ್ಲುವ ಬದುಕು,
ಕತ್ತಲಲಿ ಒತ್ತುವ ಕಾಲವೆಲ್ಲ ಮರೆಯುವುದು.
ಬಂದಂತೆ ಬತ್ತಲಲಿ ನಂದಿ ಹೋಗುವುದು.

Saturday, April 30, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success