ಬೊಂಬೆ Poem by Praveen Kumar in Bhavana

ಬೊಂಬೆ

ಬಾ ಎಂದಾಗ ಬರದವಳು, ಬರೆ ಬೊಂಬೆ,
ನೀನೇಕೀಗ ಕರೆದು ಕರೆದು ಬರುವೆನೆಂಬೆ,
ಯಾರಾರೋ ಹುಟ್ಟು ಹೆಳವರ ಬೆನ್ನು ಹಿಡಿದ ರಂಭೆ,
ನಿನ್ನೀ ವಿಸ್ಮಯದ ಮೋಹಾಸಕ್ತಿಯ ನಾನು ನಂಬೆ;
ಹಳಸಿದನ್ನದ ರುಚಿ ಹಿಡಿದ ಹೊಲತಿಯೆ ನಿನಗೆ
ಪಂಚಪರಮಾನ್ನದ ಸ್ವಾದ ಹಿಡಿಸೀತು ಹೇಗೆ?
ಮೈಮಾರಿ ಮುಪ್ಪಾಗಿರುವ ನೀನು ಗೂಬೆ ಕರಿಕಾಗೆ;
ತೀಟೆ ತೀರಿಸುವ ತುಡುಗರಿಗೆ ತಕ್ಕುದಾದವಳೆ,
ಶುಚಿ ರುಚಿಗಳ ಬಗ್ಗೆ ನಿನಗೇನು ಗೊತ್ತು ಹೇಳೆ;
ಮೈ ಬಿಚ್ಚಿ ಬಂದರೇನು, ನೀನು ಮೈ ಮುಚ್ಚಿ ಬಂದರೇನು,
ಥೂ ಎಂದು ಉಗುಳಿ ಕಣ್ಣು ತಿರುಗಿಸುವೆ ನಾನು.

ದಳ್ಳಾಳಿಗಳ ಹಿಡಿದು ಹಿಡಿದು ನಡುಗುವ ನಿನ್ನ ಕೈ,
ಸಿಕ್ಕವರಿಗೆಲ್ಲ ತಿಕ್ಕಿ ತಿಕ್ಕಿ ಸುಕ್ಕು ಬಿದ್ದಿರುವ ಮೈ,
ಇದು ಏಯ್ಡೊ, ಗೊನಾರಿಯವೊ, ಸಿಫಲಿಸೊ ನಾ ಕಾಣೆ;
ರೂಪವೊ, ಇದು ಕುರೂಪವೊ, ಈ ವಿಕೃತಿಗೆ ಹೊಣೆ ನೀನೆ,
ಬರಬೇಕಾದಾಗ ಬರದೆ, ಕೊಡಬೇಕಾದುದನು ಕೊಡದೆ,
ಶನಿಯಂತೆ ವಕ್ರಿಸಿ, ಈಗ ಸೋಂಕು ಹಬ್ಬುವೆ ಏಕೆ?
ನಿನ್ನ ದುರ್ನಾತ ಮಾರು ಗಾವುದದಿಂದ ಬಡಿಯುತ್ತಿದೆ ಮೂಗು,
ರಾತ್ರಿ ನಿದ್ರೆ ಕೆಡಿಸಿದೆ, ಮತ್ತೆ ದಿನ ಶಾಂತಿ ಕೆಡಿಸುವುದು ಸಾಕೆ?
ಹೊಲಸು ಹುಡುಕುವ ಹಂದಿ, ನಿನಗೇಕೆ ಒಳ್ಳೆಯ ಮಂದಿ,
ತಾರತಮ್ಯವಿಲ್ಲದ ಕೀಟ, ನನಗೇಕೆ ನಿನ್ನೀ ಕಾಟ,
ಪೀಡೆಯೆ ತೊಲಗಾಚೆ, ನೀನು ಬರೆ ಬೀದಿ ಕುಡುಕರ ಸೂಳೆ.

ಕೆಂಪು ಬಾು ದೊರೆ ದೊರೆಸಾನಿಗಳ ನಿರ್ಜಿವ ಕೈ ತೊತ್ತು,
ನಿನ್ನನ್ನು ಕೋಟೆಯಲ್ಲಿಟ್ಟು ಕೊಡುವರು ಹಳಸಿದ ಅನ್ನದ ತುತ್ತು,
ಯಾಕಿಷ್ಟು ಕಾಳಜಿಯೆಂದು ನಿನಗೇನಾದರೂ ಗೊತ್ತೆ?
ನೀನು ತುಂಬಬೇಕಲ್ಲ ಅವರ ರಾತ್ರಿ ಸಂಪತ್ತಿನ ಖಜಾನೆ,
ಅವರು ಆಡುವಾಗ, ಮಾಡುವಾಗ, ದುಷ್ಟ ಲಂಚದ ಭಜನೆ;
ಜಾಸ್ತಿ ಕೊಟ್ಟವರಿಗಷ್ಟೆ ಮಾರುವರು ನಿನ್ನ ಕೆಟ್ಟ ದೇಹ;
ಬೇರೇನೂ ಇಲ್ಲದವರಿಗಷ್ಟೆ ನಿನ್ನ ದೇಹದ ದಾಹ,
ಮನೆ ಮಂದಿಯ ಮಾರಿಯೂ ಅವರು ಕೊಳ್ಳುವರು ನಿನ್ನ,
ಹೀಗಿರುವಾಗ ನೀನೇಕೆ ಬಂದೆ ಹುಡುಕುತ್ತ ನನ್ನ?
ಮನೆ ಹೊಸ್ತಿಲು ದಾಟಿ ಒಳ ಬರತಕ್ಕವಳಲ್ಲ ನೀನು,
ಹೃದಯ ಗರ್ಭಗುಡಿಗೆ ನಿನ್ನ ನೆರಳು ಬೀಳತಕ್ಕದ್ದಲ್ಲ.

ಓ ಕೋತಿ ಮುಸುಡಿಯೇ, ಕುಲಟೆ, ನಿರ್ಲಜ್ಜೆ, ಭೃಷ್ಠೆ,
ನನ್ನ ದಾರಿಂದ ದೂರ ತೊಲಗು, ನೀಚೆ, ನಿಕೃಷ್ಠೆ;
ಕೆಟ್ಟು ಹೋಗುವೆ ನಾನು ಬಿದ್ದರೆ ನಿನ್ನ ದುಷ್ಟ ದ್ಠೃ,
ಯಾರವರು ಕೇಂದ್ರದಲ್ಲಿ ಮಾಡಿದರು ನಿನ್ನ ಕೆಟ್ಟ ಸ್ಠೃ?
ಗೃಹ, ಪೋಲೀಸು, ಮುಖ್ಯ, ಯುಪಿಎಸ್ಸಿ ನಿನ್ನ ದಳ್ಳಾಳಿಗಳು,
ಶುಚಿರುಚಿಗಳು ಅವರಿಗೆ ಒಗರು, ಕಾರ ಬೆಳ್ಳುಳ್ಳಿಗಳು;
ನೀನೀಗ ಲಂಚಕೋರರ, ಬಾಲಬುಡುಕರ ಹೊಲಸಿನ ಹೊಂಡ,
ನಿನ್ನನ್ನೀಗ ಬಯಸುವವ ಅಪ್ರಯೋಜಕ ಷಂಡ, ಭಂಡ;
ನೀನಾಗಿ ಅಂದು ಬಂದಿದ್ದರೆ ಅಥವ ಮುಂದೆ ಕರೆದಾಗ ಬಂದು
ಕೊರಳನಪ್ಪಿದ್ದರೆ ನಿನ್ನ ಹೃದಯದಲ್ಲಿರಿಸುತ್ತಿದ್ದೆ,
ಆದರೆ ನೀನೀಗ ಬೀದಿ ಸೂಳೆ, ಕೊಳಕು ಕುಡುಕರ ಸೊತ್ತು.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success