ಬಯಕೆಯ ಸೆಳಕು Poem by Praveen Kumar in Divya Belaku

ಬಯಕೆಯ ಸೆಳಕು

ಬಯಕೆಯ ಸೆಳಕಿನ ಅವಳ ಕಣ್ಣಲ್ಲಿ ನನ್ನ ಕಣ್ಣನ್ನಿಟ್ಟು,
ಅವಳಂತರಂಗವ ಹೊಕ್ಕು ದೀರ್ಘ ಶೋಧಿಸಿದೆ ನಾನು;
ಮಡುಕಟ್ಟಿದ ಬಯಕೆಗಳು, ಕನಸುಗಳ ಮಹಾಪೂರ,
ನನ್ನ ಉಪಕ್ರಮವನ್ನು ನೆರೆ ಕಾಯುವುದನು ಕಂಡೆ.

ನಡುಗುವ ಕೈಯಿಂದ ನಾನವಳ ಬಳಿ ಸೆಳೆದು,
ಕಂಪಿಸುವಾ ಎಳೆ ಮೈಯ ಕೈತುಂಬ ಬಿಗಿ ಹಿಡಿದು,
ಮುಖವೆತ್ತಿ, ನನ್ನ ತುಟಿಯನ್ನವಳ ತುಟಿಗೊತ್ತಿದೆನು;
ತುಟಿ ತುಟಿಯ ಸೇರಿ ನಾವು ಹುಚ್ಚಾಗಿರುವಾಗ,
ಏನೋ ಚುಂಬಕ ಶಕ್ತಿ, ವಿದ್ಯುತ್ತು ಪ್ರವಹಣ, ಆವೇಗ
ಮೈ ಮೈಯನು ಸುತ್ತಿ ನಮ್ಮನ್ನು ಬಿಗಿ ಬೆಸೆದಿರುವಾಗ,
ತಿಳಿಯದಾವೇಗದಿ ನಾನವಳ ಮುಖ ತುಂಬ ಚುಂಬಿಸಿದೆ,
ಮುಖಕೆ ಮುಖವನಿಟ್ಟವಳ ತುಂಬು ಚೆಲುವನ್ನಾಸ್ವಾದಿಸಿದೆ;
ನನ್ನ ಜತನದಲಿ ಜೀವವಿಟ್ಟವಳು ತನ್ನನ್ನೆ ನನ್ನ ಕೈಯಲಿಟ್ಟು,
ತೃಪ್ತ ಭಾವದಲಿ ನನ್ನೆದುರು ಮೈಯೊಡ್ಡಿ ಮಲಗಿದಳು.

ತೀರಲಾರದ ದಾಹ ನನ್ನ ಮೈಯ ಸುಡುತ್ತಿರುವಾಗ,
ಅವಳ ಚೆಲುವಿನ ಸೆಳೆತ ಸಕಲ ಪ್ರಜ್ಞೆ ಕಸಿದಿರುವಾಗ,
ಹಿತ ಕಂಪನದಲ್ಲೆ ನನ್ನ ಕೈ ಅವಳೆದೆಯ ಉಬ್ಬನ್ನೇರಿ,
ಎದೆಯ ಮೇಲಿನ ನವಿರು ಪರದೆ ಮೆಲ್ಲಮೆಲ್ಲನೆ ಸರಿಸೆ -
ಅದೇನು ಮೋಹಕ ನೋಟ, ಚಿನ್ನದ ಗೋಪುರ ಎರಡು,
ಹುಣ್ಣಿಮೆ ಚಂದ್ರನೆ ತುಂಬಿ ಎರಡಾಗಿ ಮೂಡಿದ ಹಾಗೆ,
ಬೆಳ್ಳನೆಯ ಬೆಳದಿಂಗಳಲಿ ಮಿಂದ ತಾಜಮಹಲಿನ ಹಾಗೆ;
ನನ್ನನ್ನೆ ನಾ ಮರೆತು ನಡುಗುವ ಬಯಕೆಯ ಕೈಯಿಂದ
ಏರಿಳಿಯುವ ಆ ತುಂಬು ಚೆಲುವನ್ನು ಕೈ ತುಂಬ ಹಿಡಿದೆ,
ಕೈಯಾಡಿ, ತುಟಿಯೊತ್ತಿ, ಒತ್ತಿ ಅದು ಅರಳುವುzನು ಕಂಡೆ.

ತುಟಿಯ ಸಿಹಿ ಸ್ಪರ್ಷದಲಿ, ನನ್ನ ಹಿತದ ಕೈಯೊತ್ತಿನಲಿ
ತನ್ನನ್ನೆ ಮರೆತವಳು ನನ್ನನ್ನಪ್ಪಿ ಬಿಗಿದಪ್ಪಿ ತಬ್ಬಿದಳು;
ಬಯಕೆ ದಾಹದ ಕಾವು ನೋವು ನೆತ್ತಿಗೇರಿದ ನಾವು
ಮೈ ಮೈ ಹೊಸೆದು, ಹಿಡಿದು, ಬೆಗಿದಪ್ಪಿ, ನೆರೆ ನೆರೆದು,
ದಾಹ ತೀರುವವರೆಗೆ ಜೊತೆ ಹೊರಳಿದೆವು, ಉರುಳಿದೆವು;
ಮತ್ತೆ ಮತ್ತೆ ಬೇಕೆಂದು, ಮೈ ಮೈಯ ತಬ್ಬಿ ಬಿಗಿದಪ್ಪಿ,
ಕಾದ ಚಿನ್ನದ ಕೆಂಪಡರಿದ ದಾಹದ ದೇಹಗಳ ಬೆಸೆದು,
ಒಂದುಸಿರು, ಒಂದೆ ಜೀವ, ಒಂದೆ ದೇಹವಾಗಿ ನಾವು,
ತೃಪ್ತಿ ಪರಾಕಾಷ್ಠೆಯಲಿ ಒಬ್ಬರೊಬ್ಬರೊಳಗೆನೆ ಹುದುಗಿ
ನಿಜ ಸುಖದ ಗಾಢತೆಯಲ್ಲಿ ಮೂರ್ತರಾದೆವು ಅಂದು.

ನನ್ನಾಶೆಯ ಕವಳ, ನನ್ನ ದಾಹದ ಮೂರ್ತರೂಪ ಅವಳು,
ಅವಳಾಶೆಯ ತೃಪ್ತಿ, ಮೈ ಮನದ ಪರಿಪೂರ್ಣತೆ ನಾನು;
ಬಯಕೆ ಬಯಕೆ ಸೇರುವುದೆ ಲೋಕದ ಸುಖದ ಗುಟ್ಟು,
ನಾನು ಅವಳು ಸೇರುವುದು ನಮ್ಮ ಹೊಸ ಚೇತನದ ಹುಟ್ಟು.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success