ಗುರಿ ತಲಪುವ ತನಕ Poem by Praveen Kumar in Divya Belaku

ಗುರಿ ತಲಪುವ ತನಕ

ನೀನೆಲ್ಲೇ ಇರು, ಹೇಗೇ ಇರು, ನೀನೆಂದೂ ನನ್ನವಳು,
ನನ್ನಾತ್ಮ ಗರ್ಭಗುಡಿಯ ಶೋಭ ಶ್ರೀ ದೇವಿ ನೀನು;
ಆ ಲೋಕ, ಈ ಲೋಕ, ಮತ್ತಾವ ಲೋಕದಲೆ ಇರಲಿ,
ನನ್ನೊಂದೊಂದೆದೆ ಬಡಿತದ ಸ್ಥಿರ ಸ್ಥಾಯಿ ನೀನು.

ಆತ್ಮ ಬೆಳಕಿನ, ಹೃದಯ ತುಡಿತದ ಕವಲುಗಳು ನಾವು,
ಮತ್ತೆ ಕೂಡಿ ಬೆಸೆಯುವುದೊಂದೆ ನಿನ್ನ ನನ್ನ ಧ್ಯೇಯ;
ಜನ್ಮಾಂತರ ಯುಗಾಂತರ ಕಾದು ಕಾದು ಸೋತ ನಾವು
ನಿರಂತರ ಕಾಯುವೆವು ನಮ್ಮ ಗುರಿ ತಲಪುವ ತನಕ.

ನಮ್ಮ ಗುರಿ ಮುಂದೆ, ನಮ್ಮ ಧ್ಯೇಯ ಒಂದೆ, ಮುಂದೆ,
ನಮ್ಮೊಳಗಿನ ಧ್ವನಿ, ವ್ಯಾಕುಲತೆ, ನೋವುಗಳು ಒಂದೆ;
ದಾರಿಯು ಒಂದೆ, ತೀರ ಒಂದೆ, ದೋಣಿ ಬೇರೆ, ಬೇರೆ,
ನಾವು ಹಾಕುವ ಹುಟ್ಟು ಒಂದೆ, ಓಘವು ಬೇರೆ, ಬೇರೆ.

ಎಲ್ಲವೂ ಇದ್ದು, ಏನೂ ಇಲ್ಲದ ನೋವುಗಳು ನನ್ನವು,
ಇದ್ದದನ್ನೆಲ್ಲ ಎಡ ಬಲ ಬಿಸುಟ ವೈರಾಗ್ಯವು ನಿನ್ನದು;
ಕತ್ತಲು ಸುತ್ತಲು ನನಗೆ ನಿನ್ನ ಹೊರತು, ನೀನೆನ್ನ ಬೆಳಕು,
ನಿನ್ನಿಂದಲೆ ಸತ್ಯ ಸತ್ಯ, ನಿತ್ಯ, ಜೀವನವೇ ಸುಖದ ನೃತ್ಯ.

ನಾ ನಿನಗೆ ಅರ್ಥ, ಮಂತ್ರ, ತೃಪ್ತಿ, ಜೀವನದ ಮೌಲ್ಯ,
ನಶ್ವರ, ನಾಸ್ತಿ, ನಿರ್ವಾತ ತಪಸ್ಸು, ಜಗತ್ತು ನನ್ನ ವಿನಹ;
ನಾ ನಿನ್ನ ಚೇತನ, ಉಸಿರು, ಜೀವದ ಒಳ ಒಳ ಜೀವ,
ನಿನ್ನ ಬಾಳ ತಪಸ್ಸಿನ ಘೋರ ನಿರ್ಮಲ ಆತ್ಮ ಧ್ಯಾನ.

ನೀನೆಲ್ಲೇ ಇರಲಿ, ನಾನೆಲ್ಲೇ ಇರಲಿ, ನಾವು ಹೇಗೇ ಇರಲಿ,
ನಾವೊಬ್ಬರೊಬ್ಬರೊಳಗೆÀನೇ ನಿರಂತರ ಅಂತಸ್ಥ ಸ್ಥಲೀಕರು;
ಯಾವ ಲೋಕದಲೇ ಇರಲಿ, ಯಾವ ರೂಪದಲೇ ಇರಲಿ,
ನಾವೊಬ್ಬರೊಬ್ಬರ ಧನ್ಯತೆ, ಸಂತ್ಠು, ತೃಪ್ತಿ, ಶಾಂತಿ, ಪ್ರೀತಿ.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success